Apr 23, 2024
Apr 23, 2024
Apr 23, 2024
Apr 23, 2024
Apr 23, 2024
ಸಿದ್ಧಾಂತ ಎಂಬ ಪದವನ್ನು ಸಿದ್ಧ + ಅಂತ ಎಂದು ಬಿಡಿಸಬಹುದು. ಸಿದ್ಧ ಎಂದರೆ, ಸಾಧಿಸಲ್ಪಟ್ಟದ್ದು. ಈ ಸಾಧನೆಯ ಅಂತವೇ ಸಿದ್ಧಾಂತ. ಪ್ರಯತ್ನ ಪೂರ್ವಕವಾಗಿ ಪಡೆದಂತಹ ನಿರ್ಣಯವೇ ಸಿದ್ಧಾಂತ. ನಾವು ಯಾವುದರ ಬಗ್ಗೆ ಪ್ರಯತ್ನ ಪೂರ್ವಕವಾಗಿ ನಿರ್ಣಯಕ್ಕೆ ಬರಲು ಪ್ರಯತ್ನಿಸುತ್ತೇವೆ? ಅದು ಯಾವುದೇ ನೈಸರ್ಗಿಕ, ಭೌತಿಕ, ಸಾಮಾಜಿಕ ಅಥವಾ ಇನ್ನಾವುದೇ ವಿದ್ಯಮಾನಕ್ಕೆ ಸಂಬಂಧಿಸಿರಬಹುದು.
ವಿದ್ಯಮಾನ ಎಂದರೆ - ಅಸ್ತಿತ್ವದಲ್ಲಿರುವುದು, ಕಾಣಬರುವಂತಹುದು. ಉದಾಹರಣೆಗೆ, ಸಮಾಜದಲ್ಲಿ ಕಾಣಬರುವ ಒಂದು ಸಾಮಾನ್ಯ ವಿದ್ಯಮಾನವೆಂದರೆ, ಪೋಷಕರು ಮತ್ತು ಅವರ ಮಕ್ಕಳು ಒಟ್ಟಾಗಿ, ಒಂದೆಡೆ ಜೀವಿಸುವುದು. ಇದನ್ನು ಕುಟುಂಬ ಎನ್ನುತ್ತೇವೆ. ಹಾಗೆಯೇ, ವಿವಾಹ, ರಾಜಕೀಯ, ಆರ್ಥಿಕತೆಯಂತಹ ಸಂಸ್ಥೆಗಳನ್ನ ನಾವು ಕಾಣುವೆವು. ಇವುಗಳ ಬಗ್ಗೆ ಅಥವಾ ಇವುಗಳ ವಿವಧ ಆಯಾಮಗಳ ಬಗ್ಗೆ ಅಧ್ಯಯನ ಮಾಡಿ, ಪ್ರಯತ್ನಪೂರ್ವಕವಾಗಿ ಪಡೆಯುವಂತಹ ನಿರ್ಣಯಗಳನ್ನು ಆ ವಿದ್ಯಮಾನಕ್ಕೆ ಸಂಬಂಧಿಸಿದ ಸಿದ್ಧಾಂತ ಎನ್ನಬಹುದು. (ಗೂಡ್ ಅವರ ಕೌಟುಂಬಿಕ ಬದಲಾವಣೆಯ ಸಿದ್ಧಾಂತ, ಡರ್ಖೀಂ ಅವರ ಶ್ರಮವಿಭಜನೆಯ ಸಿದ್ಧಾಂತ, ವೆಬರ್ ಅವರ ಅಧಿಕಾರದ ವಿಧಗಳು ಇತ್ಯಾದಿ).
ಇಲ್ಲಿ, ಪ್ರಯತ್ನವೆಂದರೆ - ಉದ್ದೇಶಪೂರ್ವಕವಾಗಿ ತಾರ್ಕಿಕ/ಪ್ರಾಯೋಗಿಕ ಸಾಧನಗಳ ಮೂಲಕ ನಿರ್ದಿಷ್ಟ ವಿದ್ಯಮಾನವನ್ನು ಅಧ್ಯಯನ ಮಾಡಿ, ಅದರ ಬಗ್ಗೆ ಪರಿಶೀಲಿಸಬಹುದಾದ ನಿರ್ಣಯಗಳಿಗೆ ಬರುವುದು. ನಾವು ನಡೆಸಿದ ಅಧ್ಯಯನದ ಫಲವಾಗಿ ಕುಟುಂಬಗಳೇಕೆ ಎಲ್ಲ ಸಾಮಾಜಿಕ ಗುಂಪುಗಳಲ್ಲೂ ಕಾಣಬರುತ್ತದೆ ಎಂಬುದರ ಬಗ್ಗೆ ಸಿದ್ಧಾಂತ ರೂಪಿಸಬಹುದು. ಹಾಗೆಯೇ ಕುಟುಂಬದ ಕೇವಲ ಒಂದು ಆಯಾಮದ ಬಗ್ಗೆ ಬೆಳಕು ಚೆಲ್ಲುವಂತಹ ನಿರ್ಣಯಕ್ಕೆ ಬರಬಹುದು - ಉದಾಹರಣೆಗೆ, ಸಂಸ್ಕೃತಿಯು ಹೇಗೆ ಕುಟುಂಬದಲ್ಲಿನ ಸಾಮಾಜಿಕ ಸಂಬಂಧಗಳನ್ನು ರೂಪಿಸುತ್ತದೆ?
ಸಹಜವಾಗಿಯೇ, ನಮ್ಮ ನಿರ್ಣಯಗಳು ಕೇವಲ ಒಂದು ಕುಟುಂಬದ ಅಧ್ಯಯನಕ್ಕೆ ಸೀಮಿತವಾಗಿ, ಅದರ ಫಲಿತಾಂಶಗಳನ್ನು ಮಾತ್ರ ಆಧರಿಸಿರುವುದಿಲ್ಲ. ಅಥವಾ, ಕೇವಲ ಒಂದು ಕುಟುಂಬಕ್ಕೆ ಸೀಮಿತವಾದ ಸಿದ್ಧಾಂತವನ್ನೂ ರಚಿಸುವುದಿಲ್ಲ. ಹಾಗಾಗಿ, ಸಿದ್ಧಾಂತಗಳು ಯಾವುದಾದರೊಂದು ವಿದಯಮಾನವನ್ನು ವಿವರಿಸುವ ವ್ಯವಸ್ಥಿತವಾದ ಮತ್ತು ಸಾಮಾನ್ಯ ಪ್ರಯತ್ನವಾಗಿರುತ್ತದೆ. ಕೆಲವೊಮ್ಮೆ, ಅದು ನೀಡುವ ವಿವರಣೆ ಮುಂದಿನ ಅಧ್ಯಯನಗಳಿಗೆ ದಾರಿ ಮಾಡಿಕೊಡ ಬಹುದು.
ಸಿದ್ಧಾಂತಗಳು ಅನೇಕ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಬಹುದು:
(ಅ) ಜನರೇಕೆ ಅಪರಾಧಗಳನ್ನು ಮಾಡುವರು?
(ಆ) ಜನರೇಕೆ ವಿವಾಹವಾಗುವರು?
(ಇ) ಕೆಲವು ಜನರೇಕೆ ದೇವರಲ್ಲಿ ನಂಬಿಕೆಯನ್ನು ಇಟ್ಟಿರುತ್ತಾರೆ? ಈ ನಂಬಿಕೆ ಅವರ ಸಾಮಾಜಿಕ ಸಂಬಂಧಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ?
(ಈ) ಮಾಧ್ಯಮಗಳು ಜನರ ರಾಜಕೀಯ ನಿರ್ಣಯಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ? ಅದು ಅವರ ಮತದಾನದ ನಿರ್ಣಯದ ಮೇಲೆ ಪ್ರಭಾವ ಬೀರುವುದೇ ಅಥವಾ ಇಲ್ಲವೇ? ಬೀರುವುದಾದರೆ, ಯಾವ ಪ್ರಮಾಣದಲ್ಲಿ? ಇತ್ಯಾದಿ.
ಆದ್ದರಿಂದ,
ಸಿದ್ಧಾಂತವು ಒಂದು ಸಾಮಾನ್ಯ ಮತ್ತು ಅಮೂರ್ತ ವಿವರಣೆಯಾಗಿರುತ್ತದೆ.
ಸಾಮಾನ್ಯ: ಅದೇ ಬಗೆಯ ಅನೇಕ ವಿದ್ಯಮಾನಗಳಿಗೆ ಅನ್ವಯಿಸುತ್ತದೆ
ಅಮೂರ್ತ: ಯಾವುದೇ ಒಂದು ನಿರ್ದಿಷ್ಟ ಸನ್ನಿವೇಶಕ್ಕೆ ಸೀಮಿತವಾಗಿ, ಕೆಲವೇ ಕೆಲವು ಘಟನಾಕ್ರಮಗಳಿಗೆ ಅನ್ವಯಿಸುವಂತಹುದಲ್ಲ. ಅದನ್ನು, ವಿವಿಧ ಬಗೆಯ ಆದರೆ ಸಾಮಾನ್ನಯ ಲಕ್ಷಣಗಳನೆಉ ಒಳಗೊಂಡ ಅನೇಕ ಸನ್ನಿವೇಶಗಳನ್ನು ವಿವರಿಸಲು ಬಳಸಬಹುದು. ಒಂದೆರೆಡು ಉದಾಹರಣೆಗಳನ್ನು ಪರಿಗಣಿಸೋಣ:
ಉದಾಹರಣೆ ೧: ಕ್ರಾಂತಿಗಳು ಎಂದರೇನು? ಅವು ಏಕೆ ಘಟಿಸುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಕೊಳ್ಳೋಣ. ಈ ಪ್ರಶ್ನೆಗಳನ್ನು ಯಾವುದೇ ಒಂದು ಸನ್ನಿವೇಶಕ್ಕೆ ಸೀಮಿತಗೊಳಿಸದೇ, ವಿವಿಧ ಚಾರಿತ್ರಿಕ ಘಟ್ಟಗಳಲ್ಲಿ ನಡೆದಂತಹ ಘಟನೆಗಳನ್ನು ಪರಿಗಣಿಸಿ ವಿವರಿಸಿದರೆ, ಆಗ ಅದು ಸಿದ್ಧಾಂತವೆನಿಸಿಕೊಳ್ಳುವುದು. ಕ್ರಾಂತಿ ಎಂದರೆ ಆಮೂಲಾಗ್ರ ಬದಲಾವಣೆ. ಈ ಬದಲಾವಣೆ ಕಾಲಕ್ರಮೇಣ ಆಗುವುದಲ್ಲ. ಆಮೂಲಾಗ್ರ ಬದಲಾವಣೆಯು ಅತಿ ಶೀಘ್ರವಾಗಿ, ಆಕಸ್ಮಿಕವಾಗಿ ಆಗುವುದು. ಹಾಗಾಗಿಯೇ, ಅಮೇರಿಕಾದ ಕ್ರಾಂತಿ, ಫ್ರಾನ್ಸಿನ ಮಹಾಕ್ರಾಂತಿ, ರಷ್ಯನ್ ಕ್ರಾಂತಿ, ಹಸಿರು ಕ್ರಾಂತಿ ಮುಂತಾದ ಬಳಕೆಗಳನ್ನು ನಾವು ಕಾಣುತ್ತೇವೆ.
ಸಿದ್ಧಾಂತವು ವಿವಿಧ ಕಾಲಘಟ್ಟದಲ್ಲಿ ಬೇರೆ-ಬೇರೆ ಪ್ರದೇಶಗಳಲ್ಲಿ ಘಟಿಸಿದಂತಹ ಕ್ರಾಂತಿಗಳನ್ನು ವಿವರಿಸುವ ಪ್ರಯತ್ನ ಮಾಡುವುದು. ಕಾರ್ಲ ಮಾರ್ಕ್ಸ ಅವರ ವರ್ಗ ಸಂಘರ್ಷ ಸಿದ್ಧಾಂತ ಕ್ರಾಂತಿಯನ್ನು ಬೇರೊಂದು ರೀತಿಯಲ್ಲಿ ವಿವರಿಸುತ್ತದೆ. ಅವರ ಪ್ರಕಾರ ಚಾರಿತ್ರಿಕವಾಗಿ ನೋಡಿದಾಗ, ಉತ್ಪಾದನಾ ಸಾಧನಗಳ ಮೇಲಿನ ಒಡೆತನ ಹೊಂದಿರುವ ಗುಂಪು ಬದಲಾದಾಗ, ಸಮಾಜಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಗಳು ಉಂಟಾಗಿವೆ. ಪ್ರಾಚೀನ ಗ್ರೀಸ್ ಸಮಾಜದಲ್ಲಿ ಗುಲಾಮರು ಉತ್ಪಾದನಾ ಸಾಧನವಾಗಿದ್ದರಿಂದ, ಗುಲಾಮರ ಒಡೆಯರು ಪ್ರಬಲರಾಗಿದ್ದರು. ಕೃಷಿ ವ್ಯವಸ್ಥೆ ಬೆಳೆದಂತೆ, ಉತ್ಪಾದನಾ ಸಾಧನದ ಒಡೆತನ ಮುಖ್ಯವಾಗಿ ಭೂ ಮಾಲೀಕತ್ವವನ್ನು ಅವಲಂಬಿಸಿತ್ತು. ತದನಂತರ, ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿಯಾಗಿ, ಯಾರು ಯಂತ್ರೋಪಕರಣಗಳ ಮೇಲೆ ಒಡೆತನ ಹೊಂದಿದ್ದರೋ ಅವರು ಪ್ರಬಲರಾದರು. ಮಾರ್ಕ್ಸ ಗುರುತಿಸುವಂತೆ, ಆರ್ಥಿಕ ಸಂಬಂಧಗಳು ಸಾಮಾಜಿಕ ಸಂಬಂಧಗಳನ್ನು ನಿರ್ಧರಿಸುತ್ತಿತ್ತು. ಅವರ ಸಿದ್ಧಾಂತ ವಿವಿಧ ಬಗೆಯ ಆರ್ಥಿಕ-ಸಾಮಾಜಿಕ ಸನ್ನಿವೇಶಗಳು ಹೇಗೆ ಕ್ರಾಂತಿಗೆ ಕಾರಣವಾಗಿದೆ, ಮತ್ತು ಮುಂದೆ ಕ್ರಾಂತಿ ಯಾವ ಕಾರಣಕ್ಕಾಗಿ ಉಂಟಾಗಬಹುದು ಎಂಬುದನ್ನು ವಿವರಿಸುವ ಸಾಮಾನ್ಯ, ಅಮೂರ್ತ ಪ್ರಯತ್ನವಾಗಿರುವುದು.
ಉದಾಹರಣೆ ೨: ಮ್ಯಾಕ್ಸ ವೆಬರ್ ಅವರ ಅಧಿಕಾರಶಾಹಿಯ ಸಿದ್ಧಾಂತ - ಇದು ಕೂಡ ಸಾಮಾನ್ಯ ಮತ್ತು ಅಮೂರ್ತ ರೂಪದ್ದಾಗಿದೆ.
ವೆಬರ್ ಅವರು ಪ್ರಾಚೀನ ಚೀನಾ, ರೋಮನ್ ಕ್ಯಾಥೋಲಿಕ್ ಚರ್ಚ್, ಮಿಲಿಟರಿ, ಸೋವಿಯತ್ ರಷ್ಯಾದ ಕಮ್ಯುನಿಸ್ಟ್ ಪಕ್ಷ, ಆಧುನಿಕ ಜಗತ್ತಿನ ಪ್ರಜಾಪ್ರಭುತ್ವ ಸಮಾಜಗಳು, ನ್ಯಾಯಾಂಗ ವ್ಯವಸ್ಥೆ ಹಾಗು ಕೈಗಾರಿಕಾ ವ್ಯವಸ್ಥೆಗಳು - ಅಧಿಕಾರಶಾಹಿಯ ಲಕ್ಷಣಗಳನ್ನು ಹೆಗೆ ಹುಟ್ಟು ಹಾಕಿದವು, ರೂಢಿಸಿಕೊಂಡವು, ತಾವೇ ನಿರ್ಮಿಸಿದ ನಿಯಮಗಳ ಕಬ್ಬಿಣದ ಪಂಜರದಲ್ಲಿ ಹೇಗೆ ಸಿಲುಕಿಕೊಂಡು ವೈಯಕ್ತಿಕತೆಗೆ ಮಾರಕವಾಗಿದೆ ಎಂಬುದನ್ನು ವಿವರಿಸಿದ್ದಾರೆ.
ಆದ್ದರಿಂದ, ಸಿದ್ಧಾಂತಗಳು ನಿರ್ದಿಷ್ಟ ಘಟನೆಗಳ ಬಗ್ಗೆ ಬೆಳಕು ಚೆಲ್ಲುವುದಿಲ್ಲ; ಬದಲಿಗೆ, ಅವು ಘಟನೆಗಳ ಸಮೂಹದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಸಿವುದು. ಸಿದ್ಧಾಂತಗಳು ಸತ್ಯಸಂಗತಿಗಳನ್ನು (ಅನುಭವಕ್ಕೆ ಬರುವ ವಿದ್ಯಮಾನಗಳು) ಆಧರಿಸಿದ್ದರೂ ಕೂಡ, ಅವುಗಳ ನಿರ್ಣಯಗಳು ಸಂಕೀರ್ಣವಾದ ಸತ್ಯವಾಗಿರುತ್ತದೆ. ಎಲ್ಲ ಸಿದ್ಧಾಂತಗಳೂ ಕೂಡ ಸತ್ಯವಾದ ಹೇಳಿಕೆಗಳನ್ನು ಮೀರಿ ಮುಂದೆ ಹೋಗುವವು. ಆದರೆ, ಸತ್ಯವನ್ನು ಮೀರುವ ಎಲ್ಲ ಹೇಳಿಕೆಗಳನ್ನು ಸಿದ್ದಾಂತ ಎಂದು ಕರೆಯಲಾಗುವುದಿಲ್ಲ.
ಈ ಜಗತ್ತು ಬಹಳ ಸಂಕೀರ್ಣವಾಗಿರುವುದು. ಸಿದ್ಧಾಂತಗಳು ಈ ಸಂಕೀರ್ಣ ವಾಸ್ತವವನ್ನು ಸರಳಗೊಳಿಸುತ್ತದೆ. ಸಿದ್ಧಾಂತಗಳು ಯಾವ-ಯಾವುದರ ಬಗ್ಗೆ ಗಮನಹರಿಸಬೇಕು ಎಂಬುದರ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಇದರಿಂದಾಗಿ, ಜಗತ್ತನ್ನು ಅರಿಯುವಂತಹ ನಮ್ಮ ಪ್ರಯತ್ನ ಸುಲಭವಾಗುತ್ತದೆ. ಅಧ್ಯಯನದ ದೃಷ್ಟಿ ಕೇಂದ್ರೀಕೃತಗೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಸಿದ್ಧಾಂತದ ಕೆಲವು ವ್ಯಾಖ್ಯೆಗಳನ್ನು ನಾವು ಅರ್ಥ ಮಾಡಿಕೊಳ್ಳಬಹುದು.
ಆಕ್ಸಫರ್ಡ್ ಸಮಾಜಶಾಸ್ತ್ರ ನಿಘಂಟುವಿನ ಪ್ರಕಾರ, ಸಿದ್ಧಾಂತವು ನಮ್ಮ ಅಳತೆಗೆ ಮೀರಿದ, ಕಾಣದ (ಅಂದರೆ, ಇಂದ್ರಿಯಾನುಭವಕ್ಕೆ ನಿಲುಕದ) ವಿವರಣೆ. ಅದು ಪರಸ್ಪರ ಸಂಬಂಧಿತವಾದ ಪರಿಕಲ್ಪನೆಗಳಿಂದ ಕೂಡಿದ ಹೇಳಿಕೆಗಳನ್ನು ಹೊಂದಿರುತ್ತದೆ ಮತ್ತು ಅನುಭವಜನ್ಯ ಪ್ರಪಂಚದ ಬಗ್ಗೆ ವ್ಯವಸ್ಥಿತವಾದ ವಿವರಣೆ ನೀಡಲು ಪ್ರಯತ್ನಿಸುವುದು.
ಉದಾಹರಣೆಗೆ, ಚಳಿಗಾಲದಲ್ಲಿ ಮರದ ಎಲೆಗಳು ಬೀಳುತ್ತವೆ. ಆದರೆ ಯಾರೊಬ್ಬರೂ ಕೂಡ ಎಲ್ಲ ಮರಗಳ, ಎಲ್ಲ ಎಲಗಳು ಬಿದ್ದಿರುವುದನ್ನು ಕಂಡಿಲ್ಲ. ಒಂದೋ, ಕೆಲವು ಮರಗಳ ಎಲೆಗಳೆಲ್ಲವೂ ಬಿದ್ದರುವುದನ್ನು ನಾವು ನೋಡಿರಬಹುದು. ಎಲ್ಲ ಮರಗಳ ಎಲ್ಲ ಎಲೆಗಳ ಬೀಳುವಿಕೆ ನಮ್ಮ ಇಂದ್ರಿಯಾನುಭವ ಮೀರಿದ್ದು. ಆದರೂ ನಾವು ಚಳಿಗಾಲದಲ್ಲಿ ಮರಗಳೆಲ್ಲವೂ ಎಲೆಗಳನ್ನು ಉದುರಿಸುತ್ತೇವೆ ಎಂದು ಹೇಳುತ್ತೇವೆ ಮತ್ತು ಯಾರೂ ಇದನ್ನು ತಪ್ಪೆಂದು ವಾದಿಸುವುದಿಲ್ಲ.
ಕಾಲಿನ್ಸ್ ಸಮಾಜಶಾಸ್ತ್ರ ನಿಘಂಟಿನ ಪ್ರಕಾರ, ಸಿದ್ಧಾಂತವು ಅನುಭವಗಮ್ಯ ವಾಸ್ತವತೆ/ವಿದ್ಯಮಾನವನ್ನು ವಿವರಿಸುವ ಕಲ್ಪನೆಗಳ/ಪ್ರಸ್ಥಾವನೆಗಳ ಸಮೂಹವಾಗಿದ್ದು, ಅವು ತಾರ್ಕಿಕ ಅಥವಾ ಗಣಿತೀಯ ವಾದಗಳ ಮೂಲಕ ಪರಸ್ಪರ ಸಂಬಂಧಿತವಾಗಿರುತ್ತದೆ. ಅನುಭವಗಮ್ಯ ವಾಸ್ತವತೆಯು ಭೌತಿಕ/ಸಾಮಾಜಿಕ ಪ್ರಪಂಚಕ್ಕೆ ಸಂಬಂಧಿಸಿರುತ್ತದೆ.
ಅನೇಕ ಸಂದರ್ಭಗಳಲ್ಲಿ ಸಿದ್ಧಾಂತ ಮತ್ತು ದೃಷ್ಟಿಕೋಣ ಎಂಬ ಪದಗಳನ್ನು ಪರ್ಯಾಯವಾಗಿ ಬಳಸುವುದನ್ನು ನಾವು ಕಾಣುತ್ತೇವೆ. ತಾಂತ್ರಿಕವಾಗಿ ಹೇಳಬೇಕೆಂದರೆ, ಸಿದ್ಧಾಂತಗಳು, ದೃಷ್ಟಿಕೋಣಗಳಿಗಿಂತ ಹೆಚ್ಚು ಔಪಚಾರಿಕ ಸ್ವರೂಪದ್ದಾಗಿರುತ್ತದೆ; ಹೆಚ್ಚು ಕಠಿಣವಾದ ಮಾನದಂಡಗಳನ್ನು ಬಳಸುತ್ತವೆ. ಆದರೆ, ಸಮಾಜ ವಿಜ್ಞಾನಗಳಲ್ಲಿ ಈ ಭಿನ್ನತೆಯನ್ನು ಸ್ಪಷ್ಟವಾಗಿ ಪಾಲಿಸುವುದಿಲ್ಲ. ಹಾಗಾಗಿ, ಅನೇಕ ಅಸ್ಪಷ್ಟ ಮತ್ತು ಊಹೆಗಳಿಂದ ಕೂಡಿದ ಚಿಂತನೆಗಳೂ ಕೂಡ ಸಿದ್ಧಾಂತವೆಂದು ಪರಿಗಣಿಸಲ್ಪಡುತ್ತವೆ.
ವೈಜ್ಞಾನಿಕ ಸಿದ್ಧಾಂತವು ಪ್ರಾಯೋಗಿಕ ಪರಿಶೀಲನೆಗೆ ಒಳಪಡಿಸಬಹುದಾದ ಸ್ವರೂಪದಲ್ಲಿರುತ್ತದೆ. ಕೆಲವೊಮ್ಮೆ ಪ್ರಾಯೋಗಿಕ ಪರಿಶೀಲನೆ ಸಾಧ್ಯವಾಗದಿರಬಹುದು. ಆದರೂ ತಾರ್ಕಿಕ ಪರಿಶೀಲನೆಗೆ ಒಳಪಡಿಸಬಹುದಾದ್ದರಿಂದ, ಆ ಬಗೆಯ ದೃಷ್ಟಿಕೋಣಗಳನ್ನೂ ಸಿದ್ಧಾಂತಗಳೆಂದು ಪರಿಗಣಿಸಲಾಗುವುದು. ಉದಾಹರಣೆಗೆ, ಡಾರ್ವಿನ್ನನ ನೈಸರ್ಗಿಕ ಆಯ್ಕೆಯ ಪ್ರಕಾರ ಪ್ರಾಣಿಗಳು ವಿಕಾಸಗೊಂಡು ಮಾನವ ಹಂತದವರೆಗೂ ತಲುಪಿದೆ. ಮಾನವರ ಹತ್ತರದ ಸಂಬಂಧಿಗಳಾದ ಒರಾಂಗುಟಾನ್, ಬಬೂನ್ ಮತ್ತು ಚಿಂಪಾಂಜಿಗಳು ಹಾಗು ಮಾನವರ ನಡುವಿನಲ್ಲಿ ಯಾವ ವಿಕಸಿತ ಸ್ವರೂಪವಿತ್ತೆಂಬುದರ ಬಗ್ಗೆ ನಮ್ಮ ಬಳಿ ಸಮರ್ಪಕವಾದ ಸಾಕ್ಷಿಗಳು ಇನ್ನೂ ಲಭ್ಯವಾಗಿಲ್ಲ. ನಿಯಾಂಡರ್ತಲ್ ಗಳೇ ಮಾನವರಾದರಾ ಅಥವಾ ಇಲ್ಲವಾ ಎಂದು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಆದರೆ, ಪ್ರಾರಂಭದ ಹಂತದಿಂದ ವಿಕಾಸಗೊಂಡಿರುವುದರ ಬಗ್ಗೆ ಪುರಾವೆಗಳಿರುವುದರಿಂದ, ತಾರ್ಕಿಕವಾಗಿ ಮಾನವನವರೆಗೂ ಪ್ರಾಣಿಗಳು ವಿಕಾಸಗೊಂಡವು ಎಂದು ನಾವು ನಿರ್ಣಯಿಸಬಹುದು. ಹಾಗಾಗಿ, ಈ ಬಗೆಯ ತಾರ್ಕಿಕ ದೃಷ್ಟಿಕೋಣಗಳನ್ನೂ ಸಿದ್ಧಾಂತಗಳೆಂದು ಕರೆದರೆ ತಪ್ಪಿಲ್ಲ.
ಒಟ್ಟಿನಲ್ಲಿ, ಸಿದ್ಧಾಂತಗಳು ಕೇವಲ ಸಂಬಂಧ ಸೂಚಕ ವಿವರಣೆಗಳು ಅಥವಾ ವ್ಯಾಖ್ಯಾನಗಳಲ್ಲ; ಅವು ಅವಾಸ್ತವ ಅಂಶಗಳನ್ನು ಆಧರಿಸಿರುವುದಿಲ್ಲ. ಸಿದ್ಧಾಂತಗಳು ಐಡಿಯಾಲಜಿಗಳೂ ಕೂಡ ಅಲ್ಲ (ಐಡಿಯಾಲಜಿ: ನಿರ್ದಿಷ್ಟ ಗುರಿಗಳನ್ನು ಗುರುತಿಸುವ/ಸಾಧಿಸಲು ಅವಶ್ಯಕವಾದ ಸಾಧನಗಳ ಬಗ್ಗೆ ಮಾತನಾಡುವ, ಜ್ಞಾನಕೇಂದ್ರಿತವಲ್ಲದ ಚಿಂತನಾಕ್ರಮಗಳು).
ಸಾಮಾಜಿಕ ಸಂಶೋಧನೆಯಲ್ಲಿ, ಸಿದ್ಧಾಂತದ ರಚಿಸುವಿಕೆಯಲ್ಲಿ ಈ ಎರಡೂ ಸಂಶೋಧನಾ ವಿಧಾನಗಳನ್ನು ಸಾಮಾನ್ಯವಾಗಿ ಬಳಸಲಾಗುವುದು. ಇವೆರೆಡನ್ನು ಪ್ರತ್ಯೇಕವಾಗಯೇ ಬಳಸಬೇಕೆಂದಿಲ್ಲ. ಎ
ಸತ್ಯ ಸಂಗತಿಯು ವಾಸ್ತವತೆಯನ್ನು ಸೂಚಿಸುತ್ತದೆ. ನೈಸರ್ಗಿಕ ಅಥವಾ ಸಾಮಾಜಿಕ ವಿದ್ಯಮಾನದ ನಿರ್ವಿವಾದ ಅವಲೋಕನವನ್ನು ವಾಸ್ತವ ಎನ್ನುತ್ತೇವೆ. ಇದನ್ನು ವಾಸ್ತವಾಂಶ ಎಂದೂ ಕರೆಯ
೧. ತಿಳಿಯುವುದಕ್ಕೋಸ್ಕರ ತಿಳಿಯಲು ೨. ಯಾವುದಾದರು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಲು.
Comentarios