top of page

Fact — ಸತ್ಯ ಸಂಗತಿ

ಸತ್ಯ ಸಂಗತಿಯು ವಾಸ್ತವತೆಯನ್ನು ಸೂಚಿಸುತ್ತದೆ. ನೈಸರ್ಗಿಕ ಅಥವಾ ಸಾಮಾಜಿಕ ವಿದ್ಯಮಾನದ ನಿರ್ವಿವಾದ ಅವಲೋಕನವನ್ನು ವಾಸ್ತವ ಎನ್ನುತ್ತೇವೆ. ಇದನ್ನು ವಾಸ್ತವಾಂಶ ಎಂದೂ ಕರೆಯಲಾಗುವುದು.

ಸತ್ಯಸಂಗತಿಯು ಬಿಡಿಯಾದ (ಪ್ರತ್ಯೇಕವಾದ), ವಿಭಿನ್ನವಾದ, ಪ್ರಸ್ತುತ ಅನುಭವಕ್ಕೆ ನಿಲುಕುವ ಅಥವಾ ಚಾರಿತ್ರಿಕವಾಗಿ ಅಸ್ತಿತ್ವದಲ್ಲಿರುವ ವಿದ್ಯಮಾನ. ಸಹಜವಾಗಿಯೇ ಇದು ಇತರರ ಅನುಭವಕ್ಕೂ ನಿಲುಕಬೇಕು ಮತ್ತು ಪರಿಶೀಲನೆಗೆ ಒಳಪಡಿಸಲು ಸಾಧ್ಯವಾಗಬೇಕು.

ಊಹೆಯನ್ನು ಮಾಡಲು/ಅನುಮಾನಿಸಲು ಇದು ಆಧಾರವಾಗಿರುವುದು. ಹಾಗಾಗಿ, ಆಧಾರಾಂಶ ಎಂದೂ ಕರೆಯಬಹುದು.

ವಾಸ್ತವವು ಕೃತ್ಯ, ಘಟನೆ, ಸಂಗತಿ ಯಾವುದನ್ನಾದರೂ ಸೂಚಿಸಬಹುದು. ಸಮಾಜಶಾಸ್ತ್ರದಲ್ಲಿ ಸತ್ಯಸಂಗತಿಯು ಮೌಲ್ಯಗಳನ್ನು, ಸಾಂಸ್ಕೃತಿಕ ನಿಯಮಗಳು ಅಥವಾ ಸಾಮಾಜಿಕ ರಚನೆಗಳನ್ನು ಸೂಚಿಸುತ್ತದೆ, ಡರ್ಖೀಂ ಅವರ ಪ್ರಕಾರ, ಮೌಲ್ಯ, ನಿಯಮ ಮತ್ತು ರಚನೆಗಳು ತಲೆತಲಾಂತರದಿಂದ ಬಂದವುಗಳಾಗಿದ್ದು, ವ್ಯಕ್ತಿಗತವಾಗಿಲ್ಲದಿರುವುದರಿಂದ, ಅವುಗಳಿಗೆ ಸಾಮಾಜಿಕ ನಿಯಂತ್ರಣದ ಲಕ್ಷಣ ಕೂಡ ಇದೆ. ಪ್ರಸ್ತುತ ರೂಪಿಸಿದ ನಿಮಗಳೂ ಕೂಡ ಮನ್ನಣೆ ದೊರೆತ ನಂತರ ಅವೈಯಕ್ತಿಕ ಸ್ವರೂಪ ಪಡೆದುಕೊಳ್ಳುವುದರಿಂದ, ನಿಯಮ ರೂಪಿಸಿದವರೂ ಕೂಡ ಅದನ್ನು ಮೀರಲು ಸಾಧ್ಯವಿಲ್ಲವಾದ್ದರಿಂದ, ನಿಂತ್ರಕ ಸ್ವರೂಪ ಪಡೆದುಕೊಳ್ಳುತ್ತವೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಹಾಗಾಗಿ, ಸತ್ಯಸಂಗತಿಯು ಅನುಭವಕ್ಕೆ ನಿಲುಕಿದ ಮಾಹಿತ. ಪ್ರತ್ಯಕ್ಷವಾಗಿ, ಇಂದ್ರಿಯಗೋಚರವಾದ, ಅವಲೋಕನೆಯ ಫಲಿತಾಂಶವಾಗಿರುವುದು. ಅವಲೋಕನದ ಆಧಾರದಲ್ಲಿ ಅದಕ್ಕೆ ಸತ್ಯತೆಯ ಮೆರುಗನ್ನು ನೀಡುವುದು.

ಅವಲೋಕನ ಸರಿ ಇರಲಿಲ್ಲ, ಅಸಮರ್ಪಕ ಎಂದು ಅಥವಾ ಸಿದ್ದಾಂತದ ಸನ್ನಿವೇಶದಲ್ಲಿ ಅವಲೋಕಿಸಿದ ಪ್ರತ್ಯೇಕ ವಿದ್ಯಮಾನ ಹೊಂದುವುದಿಲ್ಲವೆಂದು ವಾಸ್ತವವನ್ನು ಪ್ರಶ್ನೆ ಮಾಡಬಹುದು. ಪಾಸಿಟಿವಿಸಂನಲ್ಲಿ, ಪ್ರಮಾಣಾತ್ಮಕ ಸಂಶೋಧನಾ ವಿಧಾನಗಳಲ್ಲಿ, ಪರಿಶೀಲಸಲ್ಪಟ್ಟ ಸತ್ಯ ಸಂಗತಿಗಳನ್ನು ಆಧರಿಸಿ ಜ್ಞಾನ ಪಡೆಯಬಹುದೆಂದು ವಾದಿಸಲಾಗಿದೆ.



 
 
 

Recent Posts

See All
Why Theory?

೧. ತಿಳಿಯುವುದಕ್ಕೋಸ್ಕರ ತಿಳಿಯಲು ೨. ಯಾವುದಾದರು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಲು.

 
 
 
Features of Theory: ಸಿದ್ಧಾಂತದ ಲಕ್ಷಣಗಳು

ವೈಜ್ಞಾನಿಕ ಸಿದ್ಧಾಂತವು ಸಾಮಾನ್ಯವಾಗಿ ಈ ಕೆಳಗಿನ ಲಕ್ಞಣಗಳನ್ನು ಹೊಂದಿರುತ್ತವೆ: (ಅ) ಸಿದ್ಧಾಂತದಲ್ಲಿ ಬಳಸುವ ಎಲ್ಲ ಪ್ರಮುಖ ಪದಗಳನ್ನು ಗುರುತಿಸಿ, ಅವುಗಳ...

 
 
 

Comments


©2022 by LearningSociology. Proudly created with Wix.com

bottom of page